ಆರಿಗಾರೋ ಕೃಷ್ಣ (ārīgārō kṛṣṇa)
ಆರಿಗಾರೋ ಕೃಷ್ಣ ಶೂರಕುಮಾರನೆ ॥ ಪ ॥
ಆರಿಗಾರೋ ನಿನ್ನ ಹೊರತು ಪೊರೆವರೊ ಎನ್ನ ಶೂರ ಮಾರಜನಕ ಅಕ್ರೂರವರದ ದೊರೆಯೆ ॥ ಅ.ಪ ॥
ಆಶಪಾಶದಿ ಸಿಲುಕಿ ಘಾಸಿಪಟ್ಟೆನೊ ಬಹಳ ವಾಸುದೇವನೆ ನಿನ್ನ ದಾಸನೆಂದೆನಿಸಯ್ಯ ||1||
ಮಾಯಮಡುವಿನೊಳ್ಮುಳುಗಿ ಗಾಯವಾಯಿತೊ ಕಾಯ ಉಪಾಯ ಯಾವುದೊ ಮುಂದೆ ರಾಯ ಹಯವದನ || 2||