Saint Vādirāja Compositions
ದಾರಿಯ ತೋರೋ ಗೋಪಾಲ (dāriya tōrō gōpāla)


ದಾರಿಯ ತೋರೋ ಗೋಪಾಲ
ವಾರಿಜನಾಭ ವೈಕುಂಠಲೋಲ॥॥
ಗಜರಕ್ಷಕನು ನೀನೆಂದು
ಅಜರುದ್ರಾದಿಗಳಂದು।
ನಿಜವಾಗಿ ಪೇಳಿದರೆಂದು
ಸುಜನರೊಡೆಯನೆ ಕೇಳಿದೆ ನಾನಿಂದು॥
ವರದ ಶ್ರೀ ಹಯವದನ ಬಾರೈ
ಕರೆದೆನ್ನ ದಾರಿಯ ತೋರೈ।
ಪರಮ ಭಕ್ತರಿಗೆ ಇನ್ನಾರೈ
ಪರಮ ಪುರುಷ ನೀನಲ್ಲದೆ ಗತಿಯಾರೈ॥

...

“Those who wish to sing always find a song!” — Unknown